ಹೀರೋ ಹೋಂಡ - ಭಾರತದ ದ್ವಿಚಕ್ರ ಮಾದರಿಗಳಲ್ಲೊಂದು. ಹೀರೋ ಮತ್ತು ಹೋಂಡ ಕಂಪನಿಗಳ ಸಹಯೋಗದಿಂದ ಮಾರುಕಟ್ಟೆಗೆ ಬಿಡುಗಡೆಗೊಂಡ ಈ ವಾಹನವು, ಎರಡೂ ಕಂಪನಿಗಳ ಹೆಸರುಗಳನ್ನೊಳಗೊಂಡಂತೆ ಹೀರೋ ಹೋಂಡ ಎಂದು ನಾಮಕರಣ ಮಾಡಲ್ಪಟ್ಟಿತು. == ಹೀರೋ ಹೋಂಡ ಮೋಟರ್ ಸೈಕಲ್ಸ್ ಲಿಮಿಟೆಡ್ == ಹೀರೋ ಹೋಂಡ ಮೋಟರ್ ಸೈಕಲ್ಸ್ ಲಿಮಿಟೆಡ್ ಎಂಬುದು ಭಾರತದ ಪ್ರಮುಖ ದ್ವಿಚಕ್ರವಾಹನ ತಯಾರಿಕೆಯ ಸಂಸ್ಥೆ. ಹೀರೋ ಹೋಂಡ ಜಂಟಿ ಸಹಯೋಗವು ೧೯೮೪ರಲ್ಲಿ ಹೀರೋ ಗ್ರೂಪ್ ಮತ್ತು ಜಪಾನ್ ದೇಶದ ಹೋಂಡ ಸಂಸ್ಥೆಯೊಂದಿಗೆ ಪ್ರಾರಂಭವಾಯಿತು. ಈ ಸಂಸ್ಥೆಯು ಪ್ರಪಂಚದ ಅತ್ಯಂತ ದೊಡ್ಡ ದ್ವಿಚಕ್ರ ತಯಾರಿಕೆಯ ಸಂಸ್ಥೆ ಎಂದು ೨೦೦೧ರಿಂದ ಪ್ರಖ್ಯಾತಿ ಪಡೆಯಿತು. ಆ ಒಂದು ವರ್ಷದಲ್ಲಿ ಇದು ೧.೩ ದಶಲಕ್ಷ ಮೋಟಾರ್ ಬೈಕ್‍ಗಳನ್ನು ಬಿಡುಗಡೆ ಮಾಡಿತ್ತು. == ಹೀರೋ ಹೋಂಡ ಸ್ಪ್ಲೆಂಡರ್ == ಹೀರೋ ಹೋಂಡ ಸ್ಪ್ಲೆಂಡರ್ ಪ್ರಪಂಚದ ಅತ್ಯಂತ ಹೆಚ್ಚು ಮಾರಾಟವಾಗಿರುವ ಮೋಟಾರ್ ಬೈಕ್. ಇದರ ಎರಡು ಸ್ಥಾವರಗಳು ಭಾರತದ ರಾಜ್ಯ ಹರಿಯಾಣದಲ್ಲಿನ ಧರುಹೆರ ಮತ್ತು ಗುರಗಾಂವ್ ನಗರಗಳಲ್ಲಿವೆ.